ಕನ್ನಡ ನಾಡು | Kannada Naadu

ಶಿರಾ ತಾಲ್ಲೂಕಿನಲ್ಲಿ ಆಧುನಿಕ ಸಂಸ್ಕರಣಾ ಕೇಂದ್ರವನ್ನು (ವಧಾಗಾರ)  ಸ್ಥಾಪನೆ ಶೀಘ್ರದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಕ್ರಮ  - ಕಂದಾಯ ಸಚಿವ ಕೃಷ್ನಭೈರೇಗೌಡ

19 Mar, 2025


 

ಬೆಂಗಳೂರು  : ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಸರ್ವೆ ನಂ. 14 ರಲ್ಲಿ 20 ಎಕರೆ ಭೂಮಿಯನ್ನು ತುಮಕೂರಿನ ಜಿಲ್ಲಾಧಿಕಾರಿ ಅವರಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಮಂಜೂರು ಮಾಡಲಾಗಿದೆ. ಇಲ್ಲಿ ಆಧುನಿಕ ಸಂಸ್ಕರಣಾ ಕೇಂದ್ರವನ್ನು (ವಧಾಗಾರ) ಸ್ಥಾಪನೆ ಮಾಡಲಾಗಿದೆ. ಕಾಮಗಾರಿಯು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.

 

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕೆ. ವೆಂಕಟೇಶ್ ಅವರ ಚುಕ್ಕೆ ಗುರುತಿನ ಪ್ರಶ್ನಗೆ ಸಂಬಂಧಿಸಿದಂತೆ ಪಶು ಸಂಗೋಪನೆ ಮತ್ತು ರೇಷ್ಮೇ ಸಚಿವರ ಪರವಾಗಿ ಉತ್ತರಿಸಿದ ಕಂದಾಯ ಸಚಿವರು, ಈ ಆಧುನಿಕ ಸಂಸ್ಕರಣ ಘಟಕವು ಪ್ರತಿದಿನ-1500 ಕುರಿ/ಮೇಕೆಗಳನ್ನು ವಧೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದು ಪ್ರಪ್ರಥಮ ಆಧುನಿಕ ಸಂಸ್ಕರಣ ಘಟಕವಾಗಿದೆ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ವಧಾಗಾರಗಳು ನಿರ್ಮಾಣವಾಗಿರುವುದಿಲ್ಲ. ಸದರಿ ವಧಾಗಾರದಿಂದ ಸರಿ ಸುಮಾರು 150 ರಿಂದ 200 ಯುವಕ/ಯುವತಿಯರಿಗೆ ಉದ್ಯೋಗ ದೊರೆಯಲಿದೆ. ವಾರ್ಷಿಕವಾಗಿ ಸರಿಸುಮಾರು ರೂ.125.00 ಕೋಟಿಗಳಷ್ಟು ವಹಿವಾಟು ನಿರೀಕ್ಷೆ ಇದೆ

 

ಆಧುನಿಕ ವಧಾಗಾರ ನಿರ್ಮಾಣಕ್ಕಾಗಿ ಒಟ್ಟು ಅಂದಾಜು ಮೊತ್ತ ರೂ.44.63 ಕೋಟಿಯಲ್ಲಿ ರೂ.26.56 ಕೋಟೆಗಳನ್ನು ಸಿವಿಲ್ ಕಾಮಗಾರಿಗಳಿಗಾಗಿ ಸರ್ಕಾರಿ ಸಂಸ್ಥೆಯಾದ KHBಗೆ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. M/s Pratha Meat works Pvt. Ltd., ಸಂಸ್ಥೆಯವರಿಂದ PPP ಮಾದರಿಯಲ್ಲಿ ರೂ.16.00 ಕೋಟಿಗಳ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಘಟಕದ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

 

ಸ್ಥಳೀಯ ಕುರಿ/ಮೇಕೆಗಳ ಮಾಂಸವನ್ನು ರಫ್ತು, ಮಾಡುವುದರಿಂದ ವಿದೇಶಗಳಿಂದ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇರುವುದರಿಂದ ಸ್ಥಳೀಯ ಕುರಿ/ಮೇಕೆಗಳ ಬೆಲೆ ಹೆಚ್ಚಾಗುವ ನಿರೀಕ್ಷೆ ಇದ್ದು ಸ್ಥಳೀಯ ಕುರಿಗಾರರಿಗೆ ಆರ್ಥಿಕವಾಗಿ ಹೆಚ್ಚು ಲಾಭವಾಗಲಿದೆ. ಕುರಿ/ಮೇಕೆಗಳಿಗೆ ಮಾರುಕಟ್ಟೆಯ ಸೌಲಭ್ಯವನ್ನು 24/7 ಸಮಯದಲ್ಲಿ ಕಲ್ಪಿಸಲಾಗುತ್ತಿದೆ. ಕುರಿ/ಮೇಕೆ ಸಾಕಾಣಿಕೆದಾರರಿಗೆ ಸಾಗಾಣಿಕೆ ವೆಚ್ಚ ಕಡಿಮೆಯಾಗಲಿದೆ. ಚರ್ಮ ಸಂಸ್ಕರಣಾ ಘಟಕ ಸ್ಥಾಪನೆಗೊಂಡು ಚರ್ಮೋದ್ಯಮ ಮತ್ತು ಇತರೆ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರೆತು ಸ್ಥಳೀಯರಿಗೆ ಉದ್ಯೋಗಾವಕಾಶ ಲಭ್ಯವಾಗುವುದು.

 

ಕರ್ನಾಟಕ ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಅತಿ ಹೆಚ್ಹು 478500 ಕುರಿಗಳನ್ನು ಹೊಂದಿರುತ್ತದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಅತೀ ಹೆಚ್ಚು ಮೇಕೆಗಳನ್ನು 161129 ಹೊಂದಿರುತ್ತದೆ. ಪಶುಪಾಲನಾ ಇಲಾಖೆಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕಾಗಿ ಶಿರಾ ತಾಲ್ಲೂಕಿನ ರೈತರಿಗೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ ಶೇ.50ರಷ್ಟು ರೂ.87,500/- ಎನ್.ಸಿ.ಡಿ.ಸಿ  ಸಾಲ ಮತ್ತು ಶೇ.25ರಷ್ಟು  ರೂ.43,750/- ರಾಜ್ಯ ಸರ್ಕಾರ ಸಹಾಯಧನದೊಂದಿಗೆ 20+1 ಕುರಿ/ಮೇಕೆ ಘಟಕಗಳನ್ನು ನೀಡಲಾಗುತ್ತಿದೆ.

 

ಶಿರಾ ತಾಲ್ಲೂಕಿನಲ್ಲಿ 132 ಫಲಾನುಭವಿಗಳಿಗೆ ಕುರಿ ಘಟಕಗಳನ್ನು ನೀಡಲಾಗಿದೆ. ನಿಗಮದ ಅನುದಾನದಲ್ಲಿ ಗಿರಿಜನ ಉಪಯೋಜನೆಯಲ್ಲಿ ಟಿ.ಎಸ್.ಪಿ. ಯೋಜನೆಯಡಿ ಕುರಿ/ ಮೇಕೆ ಘಟಕ (6+1) ಶೇ.90% ರಷ್ಟು ಸಹಾಯಧನದಲ್ಲಿ ತಾಲ್ಲೂಕಿನಲ್ಲಿ 02 ಘಟಕಗಳನ್ನು ನೀಡಲಾಗಿದೆ ಕುರಿ/ಮೇಕೆಗಳಿಗೆ ಸಾಂಕ್ರಾಮಿಕ ರೋಗಗಳ ವಿರುದ್ಧ ಕಾಲ ಕಾಲಕ್ಕೆ ಲಸಿಕೆ ಹಾಕಲಾಗಿರುತ್ತದೆ ಹಾಗೂ ಜಂತುನಾಶಕ ಔಷಧಿಯನ್ನು ನೀಡಿ ರೋಗವನ್ನು ನಿಯಂತ್ರಣದಲ್ಲಿಡಲಾಗಿದೆ.

 

ತುಮಕೂರಿನ ಪಶುಪಾಲನಾ ಮತ್ತು ಪಶುವೈದ್ಯ ತರಬೇತಿ ಕೇಂದ್ರದಲ್ಲಿ 898 ಆಸಕ್ತ ರೈತರಿಗೆ ಕುರಿ/ಮೇಕೆ ಸಾಕಾಣಿಕೆ ಕುರಿತಾಗಿ ತರಬೇತಿಯನ್ನು ನಿಯಮಿತವಾಗಿ ನೀಡಲಾಗಿದೆ ಶಿರಾ ತಾಲ್ಲೂಕಿನಲ್ಲಿ ವಲಸೆ ಕುರಿಗಾರರಿಗೆ ಮಳೆ, ಬಿಸಿಲು ಮತ್ತು ಗಾಳಿಯಿಂದ ರಕ್ಷಣೆ ನೀಡಲು ಟೆಂಟ್ ಮತ್ತು ಇತರೆ ಪರಿಕರಗಳನ್ನು 14 ಕುರಿಗಾಹಿಗಳಿಗೆ ವಿತರಿಸಲಾಗಿದೆ ಶಿರಾ ತಾಲ್ಲೂಕಿನಲ್ಲಿ ಸತ್ತ ಕುರಿ/ಮೇಕೆಗಳಿಗೆ ಅನುಗ್ರಹ ಕೊಡುಗೆ ಯೋಜನೆಯಡಿಯಲ್ಲಿ 1346 ರೈತರಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by